Thursday, September 10, 2009

ಶ್ರೀ ತುಳಸಿ ದಯೆ ತೋರಮ್ಮ

ಶ್ರೀ ತುಳಸಿ ದಯೆ ತೋರಮ್ಮ
ಅಮ್ಮ ಶ್ರೀ ತುಳಸಿ ದಯೆ ತೋರಮ್ಮ

ಅರಶಿನ ಕು೦ಕುಮ ಸೌಭಾಗ್ಯ ನೀಡಿ
ಚಿರಕಾಲ ಕಾಪಾಡಮ್ಮ
ಅಮ್ಮ ಶ್ರೀ ತುಳಸಿ ದಯೆ ತೋರಮ್ಮ

ಜನಿಸಿದ ಮನೆಯ ಶಾ೦ತಿಯ ಉಳಿಸಿ
ವರಸಿದ ಮನೆಯ ಮನೆತನ ಬೆಳೆಸಿ
ತು೦ಬಿದ ಸ೦ಸಾರ ಸ೦ತಸ ನೆಲೆಸಿ
ಎ೦ದೆ೦ದು ಇರಲು ಹರಸಮ್ಮ ತುಳಸಿಶ್ರೀ
ಮು೦ದಿನ ಬಾಳಿನ ದಾರಿಯ ತೋರಿಸಿ
ಮಕ್ಕಳ ಅರಿವಿನ ದೀಪವ ಬೆಳಗಿಸಿ
ಒಳ್ಳೆಯ ತ೦ದೆ ತಾಯಿಯು ಎನಿಸಿ
ಎ೦ದೆ೦ದು ಇರಲು ಹರಸಮ್ಮ ತುಳಸಿಶ್ರೀ

No comments:

Post a Comment